Udupi Hotel Viral Video: Most of the people like to have breakfast at Udupi Hotel whenever they go out. Even if you drink a cup of coffee there, you will be satisfied. The fame of Udupi is to that extent. But Udupi is famous not only in Karnataka but also in other states. So much so that Mahindra Group Chairman Anand Mahindra want to have Udupi Hotel breakfast once. Even now, most of the hotels have a list of the snacks available in them along with the price and hang them on the board. But still in some places we have a tradition of saying whatever is available. Similarly, a video shared on X’s account named Visit Udupi is going viral. In this video, one of Udupi’s hoteliers has explained in detail what is available in his hotel. These are all Udupi special foods. Also the list is very long. A hotel customer asked what is available in your hotel, Bhatt said like Shatabdhi Express lBajji, Chattambade, Buns, Avalakki, Satjige, Kadle Avalakki, Idli-Sambar, Idli-chutney, Vade Sambar, Sada Dosa, Neer Dosa, Chapati Kurma, Drumstick Manchuri. , names various food items what do you want at the end? They say this video is now going viral and it has caught the eye of Anand Mahindra.
Anand Mahindra has been responding to such viral videos since the beginning. Now he has shared the Udupi hotel video on his X and said that my next trip will be to Udupi. Even the menu created by Chat GTP does not match the menu of Vitthala Tea Coffee House. Next time I have to go on a trip anywhere, it is Udupi in Karnataka,” wrote Anand Mahindra .Not only Anand Mahindra, many netizens are also eager to visit Udupi as this video goes viral. “The brand of the hotel, the cleanliness, tasting the various snacks is an unforgettable experience,” commented an X-user. “Udupi is a culturally rich, beautiful coastal city. Excellent healthcare and educational facilities are also available in this town 365 days of spiritual discourses and traditions take place in this city of Krishna Math. For non-vegetarians there is good seafood, Kori Roti, Neer Dosa, Chicken Sukka,” wrote another. Visit this beautiful city once.
Udupi: ಉಡುಪಿ ಹೋಟೆಲ್ ಮೆನು ವಿಡಿಯೋ ವೈರಲ್; ನನ್ನ ಮುಂದಿನ ಟ್ರಿಪ್ ಅಲ್ಲಿಗೇ ಎಂದ ಆನಂದ್ ಮಹೀಂದ್ರಾ
Udupi: ಉಡುಪಿ ಹೋಟೆಲ್ ಮೆನು ವಿಡಿಯೋ ವೈರಲ್; ನನ್ನ ಮುಂದಿನ ಟ್ರಿಪ್ ಅಲ್ಲಿಗೇ ಎಂದ ಆನಂದ್ ಮಹೀಂದ್ರಾ
Udupi Hotel Viral Video: ಹೊರಗೆ ಎಲ್ಲಾದರೂ ಹೋದಾಗ ಹೆಚ್ಚಿನ ಜನರು ಉಡುಪಿ ಹೋಟೆಲ್ ಉಪಹಾರ ಮಾಡಲು ಬಹಳ ಇಷ್ಟಪಡುತ್ತಾರೆ. ಅಲ್ಲಿ ಒಂದು ಲೋಟ ಕಾಫಿ ಕುಡಿದರೂ ತೃಪ್ತಿ ಪಡುತ್ತಾರೆ. ಉಡುಪಿಯ ಖ್ಯಾತಿ ಅಷ್ಟರ ಮಟ್ಟಿಗೆ ಇದೆ. ಆದರೆ ಉಡುಪಿ ಕರ್ನಾಟಕದಲ್ಲಿ ಮಾತ್ರವಲ್ಲ ಹೊರ ರಾಜ್ಯಗಳಲ್ಲೂ ಫೇಮಸ್. ಎಷ್ಟೆಂದರೆ ಮಹೀಂದ್ರಾ ಗ್ರೂಪ್ ಚೇರ್‌ಮನ್ ಆನಂದ್ ಮಹೀಂದ್ರಾ ಕೂಡಾ ಉಡುಪಿ ಹೋಟೆಲ್ ತಿಂಡಿಯ ರುಚಿ ನೋಡಲು ಒಮ್ಮೆ ಬರ್ತಿದ್ದಾರಂತೆ.ಅವರಿಗೂ ಉಡುಪಿ ಹೋಟೆಲ್ ಬಗ್ಗೆ ತಿಳಿದಿದೆ ಎಂದರೆ ಇಲ್ಲಿನ ತಿಂಡಿ ರುಚಿ ಎಷ್ಟು ಅಂತ ನೀವೇ ಊಹಿಸಿ.
ಪಟ ಪಟ ಹೋಟೆಲ್ ಮೆನು ಹೇಳುವ ಭಟ್ಟರು
ಈಗಂತೂ ಬಹುತೇಕ ಹೋಟೆಲ್‌ಗಳಲ್ಲಿ ತಮ್ಮಲ್ಲಿ ದೊರೆಯುವ ತಿಂಡಿಗಳನ್ನು ದರದ ಸಹಿತ ಪಟ್ಟಿ ಹಾಕಿ ಬೋರ್ಡ್ ತೂಗು ಹಾಕಿರುತ್ತಾರೆ. ಆದರೆ ಇನ್ನೂ ಕೆಲವೆಡೆ ನಮ್ಮಲ್ಲಿ ಏನೆಲ್ಲಾ ದೊರೆಯುತ್ತದೆ ಎಂದು ಹೇಳುವ ಸಂಪ್ರದಾಯವಿದೆ. ಅದೇ ರೀತಿ, Visit Udupi ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಉಡುಪಿ ಹೋಟೆಲ್ ಭಟ್ಟರೊಬ್ಬರು ತಮ್ಮ ಹೋಟೆಲ್‌ನಲ್ಲಿ ಏನೆಲ್ಲಾ ದೊರೆಯುತ್ತದೆ ಅನ್ನೋದನ್ನು ಪಟ ಪಟ ಹೇಳಿದ್ದಾರೆ. ಅದೆಲ್ಲಾ ಉಡುಪಿ ಸ್ಪೆಷಲ್ ಫುಡ್‌ಗಳೇ. ಹಾಗೇ ಲಿಸ್ಟ್ ಕೂಡಾ ಬಹಳ ಉದ್ದ ಇದೆ. ಹೋಟೆಲ್ ಗ್ರಾಹಕರೊಬ್ಬರು, ನಿಮ್ಮ ಹೋಟೆಲ್‌ನಲ್ಲಿ ಏನೆಲ್ಲಾ ದೊರೆಯುತ್ತದೆ ಎಂದು ಕೇಳಿದ ಪ್ರಶ್ನೆಗೆ ಭಟ್ಟರು, ಶತಾಬ್ಧಿ ಎಕ್ಸ್‌ಪ್ರೆಸ್‌ನಂತೆ ಬಜ್ಜಿ, ಚಟ್ಟಂಬಡೆ, ಬನ್ಸ್, ಅವಲಕ್ಕಿ, ಸಜ್ಜಿಗೆ, ಕಡ್ಲೆ ಅವಲಕ್ಕಿ, ಇಡ್ಲಿ-ಸಾಂಬಾರ್, ಇಡ್ಲಿ-ಚಟ್ನಿ, ವಡೆ ಸಾಂಬಾರ್, ಸಾದಾ ದೋಸೆ, ನೀರುಳ್ಳಿ ದೋಸೆ, ಚಪಾತಿ ಕುರ್ಮಾ, ಡ್ರಮ್‌ಸ್ಟಿಕ್ ಮಂಚೂರಿ, ಉಪ್ಪಿಟ್ಟು ಸೇರಿದಂತೆ ನಾನಾ ಫುಡ್‌ಐಟಮ್‌ಗಳ ಹೆಸರು ಹೇಳಿ, ಕೊನೆಯಲ್ಲಿ ನಿಮಗೇನು ಬೇಕು ಹೇಳಿ? ಎನ್ನುತ್ತಾರೆ. ಈ ವಿಡಿಯೋ ಈಗ ವೈರಲ್ ಆಗುತ್ತಿದ್ದು ಇದು ಆನಂದ್ ಮಹೀಂದ್ರಾ ಕಣ್ಣಿಗೂ ಬಿದ್ದಿದೆ.
ನನ್ನ ಮುಂದಿನ ಟ್ರಿಪ್ ಉಡುಪಿಗೆ ಎಂದ ಆನಂದ್ ಮಹೀಂದ್ರಾ
ಇಂಥ ವೈರಲ್ ವಿಡಿಯೋಗಳಿಗೆ ಆನಂದ್ ಮಹೀಂದ್ರಾ ಮೊದಲಿನಿಂದಲೂ ಪ್ರತಿಕ್ರಿಯಿಸುತ್ತಾ ಬಂದಿದ್ದಾರೆ. ಇದೀಗ ಉಡುಪಿ ಹೋಟೆಲ್ ವಿಡಿಯೋವನ್ನು ತಮ್ಮ ಎಕ್ಸ್‌ನಲ್ಲಿ ಹಂಚಿಕೊಂಡಿರುವ ಅವರು ನನ್ನ ಮುಂದಿನ ಟ್ರಿಪ್ ಉಡುಪಿಗೆ ಎಂದಿದ್ದಾರೆ. ”ಚಾಟ್ ಜಿಟಿಪಿ ರಚಿಸಿದ ಮೆನು ಕೂಡಾ ವಿಠ್ಠಲ ಟೀ ಕಾಫಿ ಹೌಸ್‌ನ ಇವರ ಇವರ ಮೆನುಗೆ ಮ್ಯಾಚ್ ಆಗುವುದಿಲ್ಲ. ನಾನು ಮುಂದಿನ ಬಾರಿ ಎಲ್ಲಾದರೂ ಟ್ರಿಪ್ ಹೋಗಬೇಕು ಎಂದಾದ್ರೆ ಅದು ಕರ್ನಾಟಕದ ಉಡುಪಿಗೇ” ಎಂದು ಆನಂದ್ ಮಹೀಂದ್ರಾ ಬರೆದುಕೊಂಡಿದ್ದಾರೆ.
ಆಹಾರ ಮಾತ್ರವಲ್ಲ ಶೈಕ್ಷಣಿಕ ಸೌಲಭ್ಯವೂ ಇದೆ ಎಂದ ನೆಟಿಜನ್ಸ್
ಆನಂದ್ ಮಹೀಂದ್ರಾ ಮಾತ್ರವಲ್ಲ, ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಅನೇಕ ನೆಟಿಜನ್ಸ್ ಕೂಡಾ ಉಡುಪಿಗೆ ಭೇಟಿ ನೀಡಲು ಕಾತರರಾಗಿದ್ದಾರೆ. ”ಅಲ್ಲಿನ ಹೋಟೆಲ್ ಬ್ರಾಂಡ್, ಸ್ವಚ್ಛತೆ, ವಿವಿಧ ತಿಂಡಿಗಳ ರುಚಿ ಮಾಡುವುದೇ ಒಂದು ಮರೆಯಲಾರದ ಅನುಭವ” ಎಂದು ಎಕ್ಸ್ ಯೂಸರ್‌ವೊಬ್ಬರು ಕಾಮೆಂಟ್ ಮಾಡಿದ್ಧಾರೆ. ”ಉಡುಪಿಯು ಸಾಂಸ್ಕೃತಿಕವಾಗಿ ಶ್ರೀಮಂತ, ಸುಂದರವಾದ ಕರಾವಳಿ ನಗರ. ಈ ಸಣ್ಣ ಪಟ್ಟಣದಲ್ಲಿ ಅತ್ಯುತ್ತಮ ಆರೋಗ್ಯ ಮತ್ತು ಶೈಕ್ಷಣಿಕ ಸೌಲಭ್ಯ ಕೂಡಾ ಲಭ್ಯವಿದೆ. ಈ ಕೃಷ್ಣಮಠದ ನಗರದಲ್ಲಿ 365 ದಿನಗಳ ಆಧ್ಯಾತ್ಮಿಕ ಪ್ರವಚನಗಳು ಮತ್ತು ಸಂಪ್ರದಾಯಗಳು ನಡೆಯುತ್ತವೆ. ಮಾಂಸಾಹಾರಿಗಳಿಗೆ ಉತ್ತಮವಾದ ಸಮುದ್ರಾಹಾರ, ಕೋರಿ ರೊಟ್ಟಿ, ನೀರ್ ದೋಸೆ, ಚಿಕನ್ ಸುಕ್ಕಾ” ದೊರೆಯುತ್ತದೆ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ. ಒಮ್ಮೆ ನೀವೂ ಈ ಸುಂದರ ಊರಿಗೆ ಭೇಟಿ ಕೊಡಿ
SOURCES : Hindustan Times Kannada
Leave a Reply