The New Year began on auspicious note with the Indian stock market index rising on Wednesday. The stock market, which was on a high on Tuesday, Ugadi day, maintained its jump on Wednesday. While the BSE Sensex crossed the 75,000 level to settle at 75,038.15, the Nifty 50 ended the day at 22,753.80.

Highlights:
1.Indian stock market index rose on Wednesday, auspicious start to the new year
2.The stock market, which was on the upswing on Tuesday, Ugadi day, also jumped on Wednesday
3.Sensex crossed the 75,000 level to settle at 75,038.15, Nifty 50 closed at 22,753.80.

The new year has started auspiciously with the Indian stock market rising. The stock market, which was on the upswing on Ugadi day on Tuesday, maintained its jump on Wednesday as well.

The Bombay Stock Exchange (BSE) benchmark Sensex gained 354.45 points (0.57 per cent) to close at 75,038.15. Through this, it crossed the 75 thousand mark and again touched the all-time high. Along with this, the index, which had crossed the 74 thousand mark a few days ago, now crossed the 75 thousand level.

The National Stock Exchange (NSE) index Nifty 50 jumped 111.05 points (0.56 per cent) to settle at 22,753.80. The Indian stock market has maintained its upward momentum. But compared to Asian and European countries it is a little behind.ITC, Kotak Mahindra Bank, Bharti Airtel, State Bank of India, Asian Paints, Tech Mahindra, Reliance Industries Ltd. And Nestlé companies’ shares gained. Shares in FMCG, metals and energy sectors were the top gainers on Wednesday.Shares of Maruti Suzuki India, HDFC Bank, Larson & Toubro and Mahindra & Mahindra declined.

“Investors’ focus was on US inflation and open market movements there. The Sensex and Nifty 50 indices rallied as the market found a bullish rhythm here,” said Vinod Nair, head of research at Geojit Financial Services.In Asian markets, Japan’s Tokyo and China’s Shanghai declined. Hong Kong stumbled at the start, but the bulls rebounded at the end of the day. European markets were on the uptrend. Brent crude oil price It rose 0.18 percent to 89.58 dollars per barrel.

75,000 ಮಟ್ಟ ಮುಟ್ಟಿದ ಸೆನ್ಸೆಕ್ಸ್‌, ಹೊಸ ಸಂವತ್ಸರಕ್ಕೆ ಶುಭ ಮುನ್ನುಡಿ ಬರೆದ ಷೇರುಪೇಟೆ.

ಭಾರತೀಯ ಷೇರು ಮಾರುಕಟ್ಟೆ ಸೂಚ್ಯಂಕ ಬುಧವಾರ ಏರಿಕೆ ಕಾಣುವುದರೊಂದಿಗೆ ನೂತನ ಸಂವತ್ಸರ ಶುಭದೊಂದಿಗೆ ಆರಂಭಗೊಂಡಿದೆ. ಯುಗಾದಿ ದಿನವಾದ ಮಂಗಳವಾರ ಏರುಗತಿಯಲ್ಲಿದ್ದ ಷೇರುಪೇಟೆ, ಬುಧವಾರವೂ ತನ್ನ ಜಿಗಿತವನ್ನು ಕಾಯ್ದುಕೊಂಡಿತು. ಬಿಎಸ್‌ಇ ಸೆನ್ಸೆಕ್ಸ್‌ 75,000 ಮಟ್ಟವನ್ನು ದಾಟಿ 75,038.15ರಲ್ಲಿ ಸ್ಥಿರವಾದರೆ, ನಿಫ್ಟಿ 50ಯು 22, 753.80ರ ಮಟ್ಟದಲ್ಲಿ ದಿನದ ವಹಿವಾಟು ಕೊನೆಗೊಳಿಸಿತು.

ಹೈಲೈಟ್ಸ್‌:

  • ಭಾರತೀಯ ಷೇರು ಮಾರುಕಟ್ಟೆ ಸೂಚ್ಯಂಕ ಬುಧವಾರ ಏರಿಕೆ, ಶುಭದೊಂದಿಗೆ ಆರಂಭಗೊಂಡ ನೂತನ ಸಂವತ್ಸರ

  • ಯುಗಾದಿ ದಿನವಾದ ಮಂಗಳವಾರ ಏರುಗತಿಯಲ್ಲಿದ್ದ ಷೇರುಪೇಟೆ, ಬುಧವಾರವೂ ಜಿಗಿತ

75,000 ಮಟ್ಟವನ್ನು ದಾಟಿ 75,038.15ರಲ್ಲಿ ಸ್ಥಿರವಾದ ಸೆನ್ಸೆಕ್ಸ್‌, 22, 753.80ರ ಮಟ್ಟದಲ್ಲಿ ವಹಿವಾಟು ಕೊನೆಗೊಳಿಸಿದ ನಿಫ್ಟಿ 50

ಮುಂಬಯಿ: ಭಾರತೀಯ ಷೇರು ಮಾರುಕಟ್ಟೆ ಏರಿಕೆ ಕಾಣುವುದರ ಮೂಲಕ, ನೂತನ ಸಂವತ್ಸರ ಶುಭದೊಂದಿಗೆ ಆರಂಭಗೊಂಡಿದೆ. ಯುಗಾದಿ ದಿನವಾದ ಮಂಗಳವಾರ ಏರುಗತಿಯಲ್ಲಿದ್ದ ಷೇರುಪೇಟೆ, ಬುಧವಾರವೂ ಜಿಗಿತವನ್ನು ಕಾಯ್ದುಕೊಂಡಿತು.

ಬಾಂಬೆ ಷೇರು ವಿನಿಮಯ (ಬಿಎಸ್‌ಇ) ಸೂಚ್ಯಂಕ ಸೆನ್ಸೆಕ್ಸ್‌ 354.45 ಅಂಕ (ಶೇ. 0.57) ಏರಿಕೆ ಕಂಡು 75,038.15ರ ಮಟ್ಟ ಮುಟ್ಟಿತು. ಈ ಮೂಲಕ 75 ಸಾವಿರದ ಗಡಿ ದಾಟಿ ಮತ್ತೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಮುಟ್ಟಿತು. ಇದರೊಂದಿಗೆ ಕೆಲವೇ ದಿನಗಳ ಹಿಂದೆ 74 ಸಾವಿರದ ಗಡಿ ದಾಟಿದ್ದ ಸೂಚ್ಯಂಕ ಈಗ 75 ಸಾವಿರದ ಮಟ್ಟವನ್ನು ಮೀರಿತು.

ರಾಷ್ಟ್ರೀಯ ಷೇರು ವಿನಮಯ (ಎನ್‌ಎಸ್‌ಇ) ಸೂಚ್ಯಂಕ ನಿಫ್ಟಿ 50ಯು 111.05 ಅಂಕ (ಶೇ. 0.56) ಜಿಗಿದು, 22, 753.80ರ ಮಟ್ಟದಲ್ಲಿ ಸ್ಥಿರವಾಯಿತು. ಭಾರತದ ಷೇರು ಮಾರುಕಟ್ಟೆ ಮೇಲ್ಮುಖ ಆವೇಗವನ್ನು ಕಾಯ್ದುಕೊಂಡಿದೆ. ಆದರೆ ಏಷ್ಯಾ ಮತ್ತು ಯುರೋಪಿಯನ್‌ ದೇಶಗಳಿಗೆ ಹೋಲಿಸಿದರೆ ಕೊಂಚ ಹಿಂದೆ ಬಿದ್ದಿದೆ.

ಐಟಿಸಿ, ಕೋಟಕ್‌ ಮಹೀಂದ್ರಾ ಬ್ಯಾಂಕ್‌, ಭಾರ್ತಿ ಏರ್‌ಟೆಲ್‌, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಏಷ್ಯನ್‌ ಪೇಂಟ್ಸ್‌, ಟೆಕ್‌ ಮಹೀಂದ್ರಾ, ರಿಲಯನ್ಸ್‌ ಇಂಡಸ್ಟ್ರೀಸ್‌ ಲಿ. ಮತ್ತು ನೆಸ್ಲೆ ಕಂಪನಿಗಳ ಷೇರುಗಳು ಲಾಭ ಗಳಿಸಿದವು. ಎಫ್‌ಎಂಸಿಜಿ, ಲೋಹ ಮತ್ತು ಇಂಧನ ವಲಯಗಳ ಷೇರುಗಳು ಬುಧವಾರ ಹೆಚ್ಚಿನ ಲಾಭ ಕಂಡವು.ಮಾರುತಿ ಸುಜುಕಿ ಇಂಡಿಯಾ, ಎಚ್‌ಡಿಎಫ್‌ಸಿ ಬ್ಯಾಂಕ್‌, ಲಾರ್ಸನ್‌ ಆ್ಯಂಡ್‌ ಟೂಬ್ರೊ ಮತ್ತು ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಷೇರುಗಳು ಇಳಿಕೆ ಕಂಡವು.

“ಅಮೆರಿಕ ಹಣದುಬ್ಬರ ಮತ್ತು ಅಲ್ಲಿನ ಮುಕ್ತ ಮಾರುಕಟ್ಟೆಯ ಚಲನವಲನಗಳ ಮೇಲೆ ಹೂಡಿಕೆದಾರರ ಗಮನ ಕೇಂದ್ರೀಕೃತವಾಗಿತ್ತು. ಇಲ್ಲಿನ ಮಾರುಕಟ್ಟೆ ಆರೋಹಣ ಲಯವನ್ನು ಕಂಡುಕೊಂಡ ನಂತರ ಸೆನ್ಸೆಕ್ಸ್‌ ಮತ್ತು ನಿಫ್ಟಿ 50 ಸೂಚ್ಯಂಕಗಳು ಏರಿಕೆಯಾಯಿತು,” ಎಂದು ಜಿಯೋಜಿತ್‌ ಫೈನಾನ್ಷಿಯಲ್‌ ಸರ್ವೀಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ಹೇಳಿದ್ದಾರೆ.

ಏಷ್ಯಾದ ಮಾರುಕಟ್ಟೆಗಳಲ್ಲಿ ಜಪಾನ್‌ನ ಟೋಕಿಯೊ ಮತ್ತು ಚೀನಾದ ಶಾಂಘೈ ಇಳಿಕೆ ಕಂಡವು. ಹಾಂಕಾಂಗ್‌ ಆರಂಭದಲ್ಲಿ ಮುಗ್ಗರಿಸಿದರೂ ದಿನದ ಅಂತ್ಯದಲ್ಲಿ ಗೂಳಿ ಜಿಗಿತ ಕಂಡು ಬಂದಿತು. ಯುರೋಪಿಯನ್‌ ಮಾರುಕಟ್ಟೆಗಳಲ್ಲಿ ಷೇರು ಪೇಟೆ ಏರಿಕೆಯ ಹಾದಿಯಲ್ಲಿತ್ತು. ಬ್ರೆಂಟ್‌ ಕಚ್ಚಾ ತೈಲ ದರವು ಶೇ. 0.18ರಷ್ಟು ಏರಿಕೆಯಾಗಿ ಬ್ಯಾರೆಲ್‌ಗೆ 89.58 ಡಾಲರ್‌ಗೆ ಮುಟ್ಟಿತು.

SOURCES: Vijaya Karnataka
https://vijaykarnataka.com/business/stock-market/sensex-crosses-75000-mark-for-the-first-time-stock-market-ushers-in-auspicious-new-year/articleshow/109211137.cms

 

Leave a Reply

Leave a Reply

Your email address will not be published. Required fields are marked *