New Delhi: Government-owned oil marketing companies have given good news to traders and consumers. The price of commercial LPG cylinders (Commercial LPG Cylinders) of 19 kg weight (LPG Price) by oil marketing companies is Rs 57.5. Will decrease. This will benefit those who use LPG cylinders for commercial purposes. Also, it is known that the customers will benefit in many ways, including the reduction in the price of breakfast and meals in hotels. The new rate has come into effect from November 16.

Applicable to four cities only

The price of commercial cylinders has decreased only in four major cities of the country.  Rs. 57.5 in Delhi, Mumbai, Kolkata and Chennai. There is a decrease. 101.5 per LPG cylinder for commercial use before Diwali. had risen. Now, the day after Diwali festival ends, the oil marketing companies have reduced the cylinder prices. After the reduction in the price of LPG cylinders for commercial use, a cylinder of 19 kg in New Delhi will be Rs 1,775.5, in Kolkata Rs 1,885.5, and in Mumbai Rs 1,728. And 1,942 in Chennai. There is 209 for commercial LPG cylinder in October. Raised. 101 at the beginning of November. The increase was a huge problem for traders and consumers. It’s a relief that the price has now come down a bit

 

LPG ಸಿಲಿಂಡರ್ ಬೆಲೆ Rs. 57.5 ಇಳಿಕೆ ; ಇಲ್ಲಿದೆ ಪರಿಷ್ಕೃತ ದರ

 

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು (Oil Marketing Companies) ವ್ಯಾಪಾರಿಗಳು ಹಾಗೂ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿವೆ. 19 ಕೆ.ಜಿ ತೂಕದ ವಾಣಿಜ್ಯಿಕ ಎಲ್‌ಪಿಜಿ ಸಿಲಿಂಡರ್‌ಗಳ (Commercial LPG Cylinders) ಬೆಲೆಯನ್ನು (LPG Price) ತೈಲ ಮಾರುಕಟ್ಟೆ ಕಂಪನಿಗಳು Rs 57.5  ಇಳಿಕೆ ಮಾಡಲಿವೆ. ಇದರಿಂದಾಗಿ ವಾಣಿಜ್ಯ ಉದ್ದೇಶಗಳಿಗಾಗಿ ಎಲ್‌ಪಿಜಿ ಸಿಲಿಂಡರ್‌ ಬಳುಸವವರಿಗೆ ಅನುಕೂಲವಾಗಲಿದೆ. ಹಾಗೆಯೇ, ಹೋಟೆಲ್‌ಗಳಲ್ಲಿ ತಿಂಡಿ, ಊಟಗಳ ಬೆಲೆ ಇಳಿಕೆ ಸೇರಿ ಗ್ರಾಹಕರಿಗೂ ಹಲವು ರೀತಿಯಲ್ಲಿ ಅನುಕೂಲವಾಗಲಿದೆ ಎಂದು ತಿಳಿದುಬಂದಿದೆ. ನವೆಂಬರ್‌ 16ರಿಂದಲೇ ನೂತನ ದರ ಜಾರಿಗೆ ಬಂದಿದೆ.

ನಾಲ್ಕು ನಗರಗಳಿಗೆ ಮಾತ್ರ ಅನ್ವಯ

ದೇಶದ ನಾಲ್ಕು ಪ್ರಮುಖ ನಗರಗಳಲ್ಲಿ ಮಾತ್ರ ವಾಣಿಜ್ಯಿಕ ಸಿಲಿಂಡರ್‌ಗಳ ಬೆಲೆ ಇಳಿಕೆಯಾಗಿದೆ. ದೆಹಲಿ, ಮುಂಬೈ, ಕೋಲ್ಕೊತಾ ಹಾಗೂ ಚೆನ್ನೈನಲ್ಲಿ Rs 57.5  ಇಳಿಕೆಯಾಗಿದೆ. ದೀಪಾವಳಿಗೂ ಮೊದಲು ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ Rs 101.5 ಏರಿಕೆಯಾಗಿತ್ತು. ಈಗ ದೀಪಾವಳಿ ಹಬ್ಬ ಮುಗಿದ ಮರುದಿನವೇ ಸಿಲಿಂಡರ್‌ ಬೆಲೆಯನ್ನು ತೈಲ ಮಾರುಕಟ್ಟೆ ಕಂಪನಿಗಳು ಇಳಿಕೆ ಮಾಡಿವೆ.ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಇಳಿಕೆ ಬಳಿಕ ನವದೆಹಲಿಯಲ್ಲಿ 19 ಕೆ.ಜಿಯ ಒಂದು ಸಿಲಿಂಡರ್‌ಗೆ Rs 1,775.5, ಕೋಲ್ಕೊತಾದಲ್ಲಿ Rs 1,885.5, ಮುಂಬೈನಲ್ಲಿ Rs 1,728 ಹಾಗೂ ಚೆನ್ನೈನಲ್ಲಿ Rs 1,942 ಇದೆ. ಅಕ್ಟೋಬರ್‌ನಲ್ಲಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯನ್ನು Rs 209 ಏರಿಕೆ ಮಾಡಲಾಗಿತ್ತು. ನವೆಂಬರ್‌ ಆರಂಭದಲ್ಲೂ Rs 101 ಏರಿಕೆ ಮಾಡಿದ್ದು ವ್ಯಾಪಾರಿಗಳು ಹಾಗೂ ಗ್ರಾಹಕರಿಗೆ ಭಾರಿ ತೊಂದರೆಯಾಗಿತ್ತು. ಈಗ ಬೆಲೆಯನ್ನು ತುಸು ಇಳಿಸಿರುವುದು ನಿಟ್ಟುಸಿರು ಬಿಡುವಂತಾಗಿದೆ.

 

SOUCRES : Urtv24

Leave a Reply

Leave a Reply

Your email address will not be published. Required fields are marked *