Self-Employment Planning Workshop
Self-Employment Planning Workshop
Self-Employment Planning Workshop
Self-Employment Planning Workshop
Self-Employment Planning Workshop
Self-Employment Planning Workshop
  • December 19, 2024 3:18 pm
  • Udupi, Udupi, Karnataka
  • Classified ADs
New

ಸ್ವ-ಉದ್ಯೋಗ ಯೋಜನೆ ಕಾರ್ಯಾಗಾರ

ಉಡುಪಿ : ಕೇಂದ್ರ ಸರಕಾರದ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣ ಘಟಕ (PMFME) ಯೋಜನೆಯ ಮೂಲಕ ಸಹಾಯಧನ ಪಡೆದು ಸ್ಪೋದ್ಯೋಗ ಸೃಷ್ಟಿಸಿಕೊಳ್ಳುವ ಬಗ್ಗೆ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಡಿ.23ರ ಬೆ.11ಕ್ಕೆ ಕೃಷಿ ಇಲಾಖೆಯ ಮೂಲಕ ಕಾರ್ಯಾಗಾರ ನಡೆಯಲಿದೆ.
ಒಂದು ಜಿಲ್ಲೆ-ಒಂದು ಉತ್ಪಾದನೆ ಆಶಯದಡಿ ಪ್ರಾರಂಭಗೊಂಡ ಈ ಯೊಜನೆಯಡಿ ಜಿಲ್ಲೆಯಲ್ಲಿ ಮೀನುಗಾರಿಕೆ ಉತ್ಪನ್ನಕ್ಕೆ ಪ್ರಾಧಾನ್ಯತೆ ನೀಡಲಾಗಿದೆ. ಇದರೊಂದಿಗೆ ಮನೆಗಳಲ್ಲಿ ವ್ಯಾಪಾರದ ಅಂಗಡಿ ಮತ್ತು ಕಿರು ಉದ್ಯಮ ಸ್ಥಾಪಿಸಬಹುದಾಗಿದೆ. 18 ವರ್ಷ ಮೇಲ್ಪಟ್ಟ ಮಹಿಳೆಯರು, ಪುರುಷರು ಹಾಗೂ ಸ್ವ-ಸಹಾಯ ಸಂಘಗಳು, ರೈತ ಉತ್ಪಾದಕ ಸಂಸ್ಥೆಗಳು ಕೋ-ಆಪರೇಟಿವ್ ಸೊಸೈಟಿಗಳು, ಖಾಸಗಿ ಮಾಲಕತ್ವದ ಸಂಸ್ಥೆಗಳು ಮತ್ತು ಸರಕಾರೇತರ ಸಂಸ್ಥೆಗಳು ಯೋಜನೆಯ ಸೌಲಭ್ಯ ಪಡೆಯಬಹುದಾಗಿದೆ. ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಶೇ.50 ರಷ್ಟು ಸಹಾಯಧನ 15 ಲಕ್ಷ ಗರಿಷ್ಠ ಮಿತಿಯೊಂದಿಗೆ ಸಹಾಯಧನ ನೀಡಲಾಗುವುದು. ಯೋಜನೆಯಡಿಯಲ್ಲಿ ಹಿಂದೆ ಸಹಾಯಧನ ಪಡೆದವರೂ ಇತರ ಸಬ್ಸಿಡಿ ಅರ್ಜಿ ಸಲ್ಲಿಸಬಹುದು. ಮೀನಿನ ಮೌಲ್ಯವಧಿತ ಪದಾರ್ಥಗಳು, ಹಿಟ್ಟಿನ ಗಿರಣಿಗಳು ಮತ್ತು ಪ್ಯಾಕಿಂಗ್ ಮೆಷಿನ್, ಎಣ್ಣೆ ಗಾಣ, ಬೇಕರಿ ಉತ್ಪನ್ನ ಅರಿಶಿಣ ಸಂಸ್ಕರಣೆ, ಹಪ್ಪಳ, ಸಂಡಿಗೆ, ಉಪ್ಪಿನಕಾಯಿ ತಯಾರಿಕೆ. ನಿಪ್ಪಟ್ಟು ಪಾನಿಪುರಿ, ಕೋಡುಬಳೆ, ಮಿಕ್ಸರ್, ‘ಚಿಪ್ಸ್ ತಯಾರಿಕೆ ಸಂಸ್ಕರಿಸಿದ ಚಪಾತಿ, ಪರೋಟ, ಪೂರಿ, ಹೋಳಿಗೆ ಉತ್ಪನ್ನಗಳ ತಯಾರಿಕೆ, ಮಸಾಲ ಪದಾರ್ಥಗಳು/ ಸಾಂಬಾರ್ ಉತ್ಪನ್ನಗಳ ತಯಾರಿಕೆ ಇತ್ಯಾದಿಗಳನ್ನು ತೆರೆಯಬಹುದಾಗಿದೆ. ಜಿಲ್ಲೆಯಲ್ಲಿ ಈಗಾಗಲೇ 245ಕ್ಕೂ ಹೆಚ್ಚು ಕಿರು ಘಟಕಗಳು ಸ್ಥಾಪನೆಯಾಗಿದ್ದು, 2024-25ರಲ್ಲಿ 250 ಘಟಕಗಳನ್ನು ಆರಂಭಿಸಲು ಯೋಜಿಸಲಾಗಿದೆ.

ಸಂಪರ್ಕಿಸಿ : 83103 53519

Location

Udupi,576101,Udupi,Udupi,Karnataka

Leave feedback about this

  • Quality
  • Price
  • Service